[Advaita-l] Kannada translation of a few works on HH Sri Chandrashekhara Bharati Mahaswaminam

V Subrahmanian v.subrahmanian at gmail.com
Tue Jun 6 04:06:36 EDT 2023


ಗುರುಭಕ್ತ ಶ್ರೀ ಆರ್.ಕೃಷ್ಣಸ್ವಾಮಿ ಅಯ್ಯರ್ ರವರು ಆಂಗ್ಲ ಭಾಷೆಯಲ್ಲಿ ಸ್ವಾಮಿ ಶ್ರೀ
ಜಗದ್ಗುರು ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಜೀವನ, ಉಪದೇಶಗಳನ್ನು ಕುರಿತು ರಚಿಸಿರುವ
ಸಮಗ್ರ ಕೃತಿಗಳ ಕನ್ನಡ ಅನುವಾದವನ್ನು ಸಂಗ್ರಹಿಸಿ ಶ್ರೀ ಹುರಗಲವಾಡಿ ಲಕ್ಷ್ಮೀನರಸಿಂಹ
ಶಾಸ್ತ್ರಿಗಳವರು 'ಸ್ವಾಮಿ ಶ್ರೀ ಚಂದ್ರಶೇಖರ ಭಾರತೀ ಜಗದ್ಗುರು ದರ್ಶನ' ಎಂಬ ಕೃತಿಯನ್ನು
ತಮ್ಮ ಸಂಪಾದಕತ್ವದಲ್ಲಿ ಹೊರ ತಂದಿದ್ದಾರೆ.ಈ ಪುಸ್ತಕವು ಶೃಂಗೇರಿ ಜಗದ್ಗುರುದ್ವಯರ
ದಿವ್ಯಚರಣಾರವಿಂದಗಳಲ್ಲಿ ದಿನಾಂಕ 01-06-2023ರಂದು ಸಮರ್ಪಿತವಾಯಿತು.ಈ ಪುಸ್ತಕವು
ಆಸ್ತಿಕರಿಗೆ ಜೀವನ ಧರ್ಮ ದೀಪಿಕೆಯಾಗಿ ಮಾರ್ಗದರ್ಶನ ನೀಡುವುದರಲ್ಲಿ ಯಾವುದೇ
ಸಂದೇಹವಿಲ್ಲ.ಆಸಕ್ತ ಗುರುಭಕ್ತರು ಇದರ ಸದುಪಯೋಗ ಪಡೆಯಬೇಕೆಂದು ಕೋರಲಾಗಿದೆ.
ಪುಸ್ತಕದ ಬೆಲೆ ರೂ 6೦೦/-
ಅಂಚೆ ವೆಚ್ಚ ಪ್ರತ್ಯೇಕ.
ಪುಸ್ತಕದ ಪ್ರತಿಗಾಗಿ
ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ 9448858322


More information about the Advaita-l mailing list