[Advaita-l] A song in Sanskrit on Shiva-Vishnu

V Subrahmanian v.subrahmanian at gmail.com
Mon Feb 26 04:41:57 EST 2018


This is a Sanskrit verse that has a fine comparison of Shiva and Vishnu.
It is very similar to a famous Tamil composition of Papanasam Sivan: maa
ramanan, umaa ramanan...http://www.karnatik.com/c1343.shtml

Listen to this song by Unnikrishnan:
https://www.youtube.com/watch?v=JeDN8RcFGcI

ಹರಿ ಹರರಲ್ಲಿ ಬೇಧವಿಲ್ಲ ಎಂದು ಸಾರಲು ಕವಿಯೊಬ್ಬ ಹರಿಹರರನ್ನು ಒಟ್ಟಾಗಿ ಒಂದೇ ಶ್ಲೋಕದಲ್ಲಿ
ಪ್ರಾರ್ಥಿಸಿದ್ದು ಹೀಗೆ..

ಪಾಯಾತ್ ಕುಮಾರಜನಕ: ಶಶಿಖಂಡಮೌಳಿ:
ಶಂಖಪ್ರಭಶ್ಚ  ನಿಧನಶ್ಚ ಗವೀಶಯಾನ:
ಗಂಗಾಂಚ ಪನ್ನಗಧರಶ್ಚ ಉಮಾವಿಲಾಸ:
ಆದ್ಯಕ್ಷರ ರಹಿತೋ ಸಹಿತೋಪಿ ದೇವ:


ಇದರಲ್ಲಿ ಮೊದಲ ಅಕ್ಷರ ಸೇರಿಸಿದರೆ ಶಿವನ ಸ್ತುತಿಯಾಗುತ್ತದೆ. ಮೊದಲ ಅಕ್ಷರ ಬಿಟ್ಟರೆ
ವಿಷ್ಣುವಿನ ಸ್ತುತಿಯಾಗುತ್ತದೆ. ಮೊದಲ ಅಕ್ಷರವಿದ್ದರೂ ಇಲ್ಲದಿದ್ದರೂ ದೇವರನ್ನೇ
ಸ್ತುತಿಸಿದಂತಾಗುತ್ತದೆ.

ಕುಮಾರಜನಕ= ಕುಮಾರನ ತಂದೆ =ಶಿವ ;
ಮಾರ ಜನಕ= ಮನ್ಮಥನ ತಂದೆ =ವಿಷ್ಣು,

ಶಶಿಖಂಡಮೌಳಿ= ಚಂದ್ರಶೇಖರ ,
ಶಿಖಂಡಮೌಳಿ=ನವಿಲುಗರಿಯನ್ನು ಧರಿಸಿದಾತ=ವಿಷ್ಣು/ಕೃಷ್ಣ ,

ಶಂಖಪ್ರಭ = ಬಿಳಿಬಣ್ಣದವ (ಶಿವ ) ,
ಖಪ್ರಭ=ಆಕಾಶ ಬಣ್ಣದವ =ವಿಷ್ಣು,

ನಿಧನ=ಶಿವ,
ಧನ=ವಿಷ್ಣು,

ಗವೀಶಯಾನ = ನಂದಿವಾಹನ ,
ವೀಶಯಾನ=ಪಕ್ಷಿವಾಹನ ,

ಗಂಗಾಂಚ= ಗಂಗಾಧರ ,
ಗಾಂಚ=ಗೋಪಾಲ

ಪನ್ನಗಧರ =ನಾಗಭೂಷಣ,
ನಗಧರ = ವಿಷ್ಣು

ಉಮಾವಿಲಾಸ= ಶಿವ ,
ಮಾವಿಲಾಸ =ವಿಷ್ಣು

ಹಾಗಾಗಿ ಮೊದಲ ಅಕ್ಷರ ಸೇರಿಸಿದರೂ ಬಿಟ್ಟರೂ ದೇವರನ್ನು ನೆನೆದಂತೆಯೇ ಆಗುವುದು.

ಅರ್ಥಪೂರ್ಣವಾದ ಈ ಶ್ಲೋಕ ಎಷ್ಟು ಸೊಗಸಾಗಿದೆಯಲ್ಲವೇ ?


More information about the Advaita-l mailing list